ಪ್ರಾಣಿ ವರ್ತನೆ 	

	ಸುತ್ತಣ ಪರಿಸರದ ವಿಭಿನ್ನ ಪ್ರಚೋದಕಗಳಿಗೆ, ದೇಶದ ಆಂತರಿಕ ಅಗತ್ಯಗಳಿಗೆ ಇಲ್ಲವೆ ಇವೆರಡೂ ಕಾರಕಗಳ ಒಟ್ಟು ಪ್ರಚೋದನೆಗೆ ಯಾವುದೇ ಪ್ರಾಣಿ ವ್ಯಕ್ತಪಡಿಸುವ ಪ್ರಕ್ರಿಯೆ (ಆ್ಯನಿಮಲ್ ಬಿಹೇವಿಯರ್). ಪ್ರಾಣಿಗಳು ವಿವಿಧ ಪರಿಸರಗಳಲ್ಲಿ ಸನ್ನಿವೇಶಗಳಲ್ಲಿ ವಿವಿಧ ರೀತಿಯಲ್ಲಿ ವರ್ತಿಸುತ್ತವೆ. ಪರಿಸರ ಬದಲಾದಂತೆ ಪ್ರಾಣಿ ವರ್ತನೆ ಸಹ ಬದಲಾಗುತ್ತದೆ. ಈ ರೀತಿಯ ವರ್ತನಾ ವ್ಯತ್ಯಾಸದಲ್ಲಿ ಪ್ರಾಣಿಗಳ ನರಮಂಡಲ ಬಹುಮುಖ್ಯ ಪಾತ್ರ ವಹಿಸುತ್ತದೆ. ಆದರೆ ಈಗ ಸಿದ್ಧವಾಗಿರುವ ವಿಷಯವೆಂದರೆ, ಪ್ರಾಣಿಗಳಲ್ಲಿ ಮನುಷ್ಯನಿಗಿರುವಷ್ಟು ವಿಚಾರ ಶಕ್ತಿ ಇಲ್ಲ. ಮನುಷ್ಯನಲ್ಲಿ ವಿಚಾರ ಶಕ್ತಿ ವಿಕಾಸದ ಪರಮಾವಧಿಯನ್ನು ಮುಟ್ಟಿದೆ ಎನ್ನುವುದಾದರೆ ಪ್ರಾಣಿಗಳ ವಿಚಾರಶಕ್ತಿ ಅತ್ಯಂತ ಕೆಳಸ್ತರದ್ದು.

	ಪ್ರಾಣಿಗಳ ವರ್ತನೆ ಹೆಚ್ಚಾಗಿ ಸ್ವಭಾವಬದ್ಧವಾಗಿದ್ದು. ಉದಾಹರಣೆಗೆ ಇರುವೆ, ಜೇನ್ನೊಣ ಮತ್ತು ಕಣಜಗಳಂಥ ಸಾಮಾಜಿಕ ಕೀಟಗಳ ಸ್ವಭಾವ ಅಚ್ಚರಿ ಮೂಡಿಸುವಷ್ಟು ವಿಶಿಷ್ಟವಾಗಿದೆ. ಇವು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ವರ್ತಿಸುವುದೇ ಒಂದು ಸೋಜಿಗ. ಹಾಗೆಯೇ ಗೋಸುಂಬೆ ನೆಲದ ಮೇಲೆ, ಮರದ ಕೊಂಬೆಯ ಮೇಲೆ ಬೇರೆ ಬೇರೆ ಬಣ್ಣ ಬರುವಂತೆ ತನ್ನ ದೇಹವನ್ನು ಮಾರ್ಪಡಿಸಿಕೊಳ್ಳುವುದು ಇನ್ನೂ ಸೋಜಿಗ. ಇಂಥ ಉದಾಹರಣೆಗಳು ನೂರಾರು.

ಬಲು ಹಿಂದಿನಿಂದ ವಿಚಾರವಂತರು ಮತ್ತು ವಿಜ್ಞಾನಿಗಳು ಪ್ರಾಣಿವರ್ತನೆಯ ಬಗ್ಗೆ ಅಧ್ಯಯನಗಳನ್ನು ನಡೆಸುತ್ತ ಬಂದಿದ್ದಾರೆ. ಬಹಳ ಹಿಂದೆಯೇ ಗ್ರೀಕ್ ವಿಚಾರವಂತರು ಪ್ರಾಣಿಗಳಿಗೆ ಆತ್ಮವಿದೆಯೇ ? ಅವು ಸತ್ತಮೇಲೂ ಅವುಗಳ ಆತ್ಮ ಅಳಿಯದ ಹಾಗೆಯೇ ಮುಂದುವರಿಯುತ್ತದೆಯೇ ? ಎಂಬ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಹಿಡಿಯುವ ಪ್ರಯತ್ನ ನಡೆಸಿದ್ದರು.

	17ನೆಯ ಶತಮಾನದ ಅನಂತರ ಮನೋವಿಜ್ಞಾನಿಗಳು ಮತ್ತು ಪ್ರಾಣಿ ವಿಜ್ಞಾನಿಗಳು ಆತ್ಯಂತ ವ್ಯಾಪಕ ಸಂಶೋಧನೆಗಳನ್ನು ನಡೆಸಿ ಪ್ರಾಣಿವರ್ತನೆಯ ಬಗ್ಗೆ ಹೆಚ್ಚು ಬೆಳಕನ್ನು ಚೆಲ್ಲಲು ಯತ್ನಿಸುತ್ತ ಬಂದಿದ್ದಾರೆ. ಈ ಸಂಶೋಧನೆಗಳು ಸ್ಥೂಲವಾಗಿ ಎರಡು ಬಗೆಯವು: ಮೊದಲನೆಯದು, ಪ್ರಾಣಿಗಳ ಜೊತೆಯಲ್ಲೇ ವಾಸಿಸುತ್ತ, ನಿಸರ್ಗದಲ್ಲಿ ಅವು ಹೇಗೆ ವರ್ತಿಸುತ್ತವೆ, ಈ ವರ್ತನೆಗೆ ಪ್ರಚೋದಕ ಅಂಶಗಳಾವುವು? ಎನ್ನುವುದನ್ನು ಪತ್ತೆ ಹಚ್ಚುವುದು. ಎರಡನೆಯದು, ಪ್ರಾಣಿಗಳನ್ನು ಪ್ರಯೋಗಶಾಲೆಯಲ್ಲಿಟ್ಟು ಅವು ಹೇಗೆ ವರ್ತಿಸುತ್ತವೆ, ವಿವಿಧ ಪ್ರಯೋಗಗಳಿಗೆ ಅವು ಪ್ರತಿಕ್ರಿಯೆಯನ್ನು ಹೇಗೆ ವ್ಯಕ್ತಪಡಿಸುತ್ತವೆ ಎನ್ನುವುದನ್ನು ತಿಳಿದು ಕೊಳ್ಳುವುದು.

	ಪ್ರಾಣಿಗಳ ಸಹಚರಿಯಾಗಿ ಅವುಗಳ ವರ್ತನೆಯನ್ನು ಅಭ್ಯಸಿಸುವುದು ಕಷ್ಟದ ಕೆಲಸ. ಇದು ಸಾಹಸದ ಕೆಲಸವೂ ಹೌದು, ಹೆನ್ರಿ ಫೇಬರ್ (1823-1915) ಎಂಬಾತ ಜೇನ್ನೊಣ ಹಾಗೂ ಕಣಜಗಳ ವರ್ತನೆಯನ್ನು ತನ್ನ ತೋಟದಲ್ಲೇ ಸುಮಾರು 40 ವರ್ಷಗಳ ಕಾಲ ಅಭ್ಯಸಿಸಿದ. ಇಂಥ ಪ್ರಯೋಗಗಳಲ್ಲಿ ವಿಜ್ಞಾನಿ ತಾನು ಆ ಪ್ರಾಣಿಗಳ ಪೈಕಿ ಒಂದು ಎಂಬುದನ್ನು ಪ್ರಾಣಿಗಳಿಗೆ ಮನವರಿಕೆ ಮಾಡಿ ಕೊಡಬೇಕಾಗುತ್ತದೆ. ಆದರೆ ಕೆಲವು ಪ್ರಾಣಿಗಳ ವರ್ತನೆಯ ವಿಷಯದಲ್ಲಿ ಇಂಥ ಪ್ರಯೋಗ ಅಸಾಧ್ಯ. ತೋಳ ಕಿರುಚುವುದು, ಗೊರಿಲ್ಲ ತನ್ನ ಎದೆ ಬಡಿದುಕೊಳ್ಳುವುದು, ಮೊಟ್ಟೆಯೊಡೆದು ಹೊರಬರುವ ತನ್ನ ಮರಿಗಳನ್ನು ತಾಯಿಮೊಸಳೆ ಬಾಯಲ್ಲಿ ಕಚ್ಚಿಕೊಂಡು ಸುರಕ್ಷಿತ ಸ್ಥಳಕ್ಕೆ ಹೋಗಿ ನೀರಿಗೆ ಬಿಡುವುದು ಮುಂತಾದ ವರ್ತನೆಗಳ ಕಾರಣವನ್ನು ಅಭ್ಯಸಿಸುವುದು ಇಂದಿಗೂ ಒಂದು ಸಮಸ್ಯೆಯೇ. ಇಂಥದೇ ಸಮಸ್ಯೆ ಬಾವಲಿಯಂಥ ಹಾರುವ ಪ್ರಾಣಿಗಳಲ್ಲೂ ಎದುರಾಗುತ್ತದೆ. ಸ್ತನಿವರ್ಗಕ್ಕೆ ಸೇರಿದ ಈ ಪ್ರಾಣಿಯ ಒಂದು ಪ್ರಭೇದ ಆಹಾರಕ್ಕಾಗಿ ಕೆಲವು ಪ್ರಾಣಿಗಳನ್ನು ಬೇಟೆಯಾಡುತ್ತದೆ. ಸಿಕ್ಕ ಆಹಾರವನ್ನು ತನ್ನ ಮೊನಚಾದ ಹಲ್ಲಿನಿಂದ ಕತ್ತರಿಸಿ ಬೆಕ್ಕು ಹಾಲನ್ನು ಹೀರುವಂತೆ ಎರೆಗಳ ರಕ್ತವನ್ನು ಹೀರುತ್ತದೆ. ಅವಕಾಶ ಸಿಕ್ಕರೆ ಮನುಷ್ಯನ ರಕ್ತವನ್ನು ಸಹ ಬಾವಲಿ ಹೀರುವುದುಂಟು. ಇದು ರಕ್ತವನ್ನೇ ಏಕೆ ಆಹಾರವಾಗಿ ತೆಗೆದುಕೊಳ್ಳುತ್ತದೆ? ಇಷ್ಟಾದರೂ ಇದರ ಮೂತ್ರಪಿಂಡ ಸರಿಯಾಗಿಯೇ ಇದೆಯೆಲ್ಲ ಎಂಬ ಪ್ರಶ್ನೆಗಳಿಗೆ ವಿವರಣೆ ಇಲ್ಲ.

	ಕೇವಲ ಸತತವಾದ ಗಮನಿಸುವಿಕೆಯಿಂದಾಗಿ ಹಲವಾರು ಪ್ರಾಣಿವರ್ತನೆಗಳನ್ನು ಅರಿಯುವುದು ಸಾಧ್ಯವಾಗಿದೆ. ಅನೇಕ ಪ್ರಾಣಿಗಳು ಚಾಕಚಕ್ಯತೆಯಿಂದ ವರ್ತಿಸುತ್ತವೆ. ಉದಾಹರಣೆಗೆ ಚಿಂಪಾಂಜಿ. ಇದು ಹುಲ್ಲಿನ ಕಡ್ಡಿಯನ್ನೋ ಸಣ್ಣ ಕೊಂಬೆಯನ್ನೋ ಗೆದ್ದಲಿನ ಗೂಡಿನೊಳಕ್ಕೆ ಚಾಚುತ್ತದೆ. ಗೆದ್ದಲು ಕಡ್ಡಿಯನ್ನು ಹಿಡಿದಾಗ ಚಿಂಪಾಂಜಿ ಅದನ್ನು ಎಳೆದುಕೊಂಡು, ಚಿಕ್ಕಮಕ್ಕಳು ಲಾಲಿಪಾಪ್‍ಅನ್ನು ಚೀಪುವ ಹಾಗೆ ಚೀಪಿಕೊಂಡು ಗೆದ್ದಲನ್ನು ತಿನ್ನುತ್ತದೆ. ಉಪಕರಣಗಳನ್ನು ಬಳಸುವ ಪ್ರಾಣಿಗಳ ಉದಾಹರಣೆಗಳು ಅನೇಕ. ಆನೆ ತನ್ನ ಸೊಂಡಿಲಿನಲ್ಲಿ ಕಡ್ಡಿಯನ್ನು ಸಿಕ್ಕಿಸಿಕೊಂಡು ಕೆರೆದುಕೊಳ್ಳುವುದು, ಖಡ್ಗಮೃಗ ಯಾವಾಗಲೂ ಕೆಸರಿನಲ್ಲಿರಲು ಇಚ್ಚಿಸುವುದು, ಇರುವೆಗಳು ಶಿಸ್ತಿನ ಸಿಪಾಯಿಗಳಂತೆ ಸಾಗಿ ಆಹಾರವನ್ನು ಶೇಖರಿಸುವುದು ಕುರಿಗಳು ಮಂದೆ ಮಂದೆಯಾಗಿ ಮೇಯುವುದು ಇಂಥ ವರ್ತನೆಗಳಿಗೆ ನಿದರ್ಶನಗಳು.

	ಕೆಲವು ವಿಜ್ಞಾನಿಗಳ ಪ್ರಕಾರ ಪ್ರಾಣಿವರ್ತನೆ ವಿಕಾಸಗೊಳ್ಳುತ್ತ ಸಾಗಿದೆ. ಆದರೆ ಈ ವಾದಕ್ಕೆ ಪುಷ್ಟಿ ದೊರಕಿಲ್ಲ. ಕೇವಲ ಕೆಲವು ಅಪ್ರತ್ಯಕ್ಷ ಚಿಹ್ನೆಗಳ ಮೂಲಕ ವರ್ತನೆ ವಿಕಾಸದ ಹಾದಿಯನ್ನು ಅನುಸರಿಸಿದೆ ಎಂದು ಹೇಳಲಾಗುತ್ತದೆ. ಪ್ರಾಣಿಯ ಆಕಾರ, ದೇಹದ ಬಣ್ಣ ಪರಿಸರದ ಒತ್ತಡ ಮುಂತಾದವು ಪ್ರಾಣಿ ವರ್ತನೆಯ ಪ್ರೇರಕಗಳು ಎಂಬುದನ್ನು ಸಾಬೀತು ಮಾಡುವ ಯತ್ನಗಳು ನಡೆದಿವೆ. ಆದರೆ ಯಾವ ನಿರ್ದಿಷ್ಟ ಕಾರಣದಿಂದಾಗಿ ಪ್ರಾಣಿಗಳು ನಿರ್ದಿಷ್ಟ ರೀತಿಯಲ್ಲಿ ವರ್ತಿಸುತ್ತವೆ ? ತಮ್ಮ ವರ್ತನೆಯ ಬಗ್ಗೆ ಅವಕ್ಕೆ ಅರಿವಿದೆಯೇ ಎಂಬುದನ್ನು ತಿಳಿಯಲಾಗಿಲ್ಲ. ಪ್ರಾಣಿಯ ಅರಿವಿಗೆ ಬಾರದ ವರ್ತನೆಗೆ ಒಂದು ಉದಾಹರಣೆ: ಒಂದು ಜಾತಿಯ ಕಂಬಳಿಹುಳು ಮರದ ಕೊಂಬೆಯ ಕೆಳಗೆ ತೂಗುಬಿದ್ದಿರುವಾಗ ಮೇಲಿಂದ ಬೀಳುವ ಬೆಳಕಿನಿಂದಾಗಿ ಕೊಂಬೆಯ ಹಾಗೂ ಹುಳುವಿನ ಮೈಬಣ್ಣ ಒಂದೇ ರೀತಿಯಾಗಿ ಕಾಣುವುದು ಇದರಿಂದ ಕಂಬಳಿಹುಳು ಇರುವುದು ಗೊತ್ತೇ ಆಗುವುದಿಲ್ಲ; ಆದರೆ ಅದು ಕೊಂಬೆಯ ಮೇಲೆ ಹತ್ತಿ ಬಂದಾಗ ಅದರ ಬಣ್ಣ ಎದ್ದುಕಾಣುತ್ತದೆ. ಕೊಂಬೆಯ ಕೆಳಗೆ ಇರುವುದರಿಂದ ಶತ್ರುಗಳಿಂದ ರಕ್ಷಣೆ ಪಡೆಯಬಹುದು ಎಂಬ ಅರಿವು ಆ ಹುಳುವಿಗೆ ಇದೆ ಎಂದು ಹೇಳಲಾಗುವುದಿಲ್ಲ, ಆದರೆ ಸಹಜ ವರ್ತನೆಯಿಂದಾಗಿ ಅದು ಕೊಂಬೆಯ ಕೆಳಗೆ ಬಂದು ಸೇರುತ್ತದೆ. ಇದಕ್ಕೆ ಭಿನ್ನವಾಗಿ ಕೆಲವು ಪ್ರಾಣಿಗಳು ತಮ್ಮ ನಿರ್ದಿಷ್ಟ ವರ್ತನೆಯ ಮೂಲಕ ಶತ್ರುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುತ್ತವೆ. ಉದಾಹರಣೆಗೆ ಕೆಂಪು ಚಿಟ್ಟೆಗಳು ಒಣಗಿದ ಎಲೆಗಳಂತೆ, ಕೆಲವು ಕೀಟಗಳು ಹಸುರು ಹುಲ್ಲಿನಂತೆ, ಕೆಲವು ಮೀನುಗಳು ನೀರೊಳಗೆ ಬೆಳೆಯುವ ಸಸ್ಯಗಳ ಎಲೆಗಳಂತೆ ಕಾಣುತ್ತಿದ್ದು ಶತ್ರುಗಳಿಂದ ರಕ್ಷಿಸಿಕೊಳ್ಳುತ್ತವೆ.

	ಪ್ರಾಯೋಗಿಕವಾಗಿ ಪ್ರಾಣಿಗಳ ವರ್ತನೆಯನ್ನು ಅಭ್ಯಸಿಸಿ, ಇಂಥ ವರ್ತನೆಗಳ ಹಿಂದೆ ಇರುವ ಪ್ರೇರಣೆಗಳು ಪತ್ತೆ ಮಾಡುವ ಕಾರ್ಯವಂತೂ ಬಹಳ ಕಾಲದಿಂದ ನಡೆದುಕೊಂಡು ಬಂದಿದೆ. ಪ್ರಯೋಗಶಾಲೆಯಲ್ಲಿ ಪ್ರಾಣಿಗಳನ್ನು ಸಂಗ್ರಹಿಸಿ ಅವುಗಳ ಮೇಲೆ ನಾನಾ ಪ್ರಯೋಗಗಳನ್ನು ನಡೆಸಿ ಅವುಗಳ ವರ್ತನೆಯನ್ನು ಬೆಳಕಿಗೆ ತರುವುದು ಈ ಅಧ್ಯಯನಗಳ ಮುಖ್ಯ ಉದ್ದೇಶ. ಆದರೆ ಇಲ್ಲಿ ಎದುರಾಗುವ ದೊಡ್ಡ ಮಿತಿಯೆಂದರೆ ಪ್ರಯೋಗಾಲಯದಲ್ಲಿ ಪ್ರಾಣಿಗಳು ನಿಸರ್ಗದಲ್ಲಿಯಂತೆ ವರ್ತಿಸುತ್ತವೆ ಎಂದು ಖಚಿತವಾಗಿ ಹೇಳಬರುವುದಿಲ್ಲ. ಆದರೂ ಪ್ರಯೋಗಾಲಯದಲ್ಲಿ ಪ್ರಾಣಿಗಳ ವರ್ತನೆಯನ್ನು ಅಭ್ಯಸಿಸುವುದು ಕೆಲವು ಕಾರಣಗಳಿಂದ ಅನಿವಾರ್ಯ. ಕೆಲವು ವಿಷಯಗಳನ್ನು ಕುರಿತಂತೆ (ಉದಾಹರಣೆಗೆ ಆಹಾರಕ್ಕಾಗಿ, ಲೈಂಗಿಕ ಕ್ರಿಯೆಗಾಗಿ, ಶತ್ರುಗಳಿಂದ ರಕ್ಷಿಸಿಕೊಳ್ಳುವುದಕ್ಕಾಗಿ) ಪ್ರಾಣಿಗಳು ನಿರ್ದಿಷ್ಟ ರೀತಿಯಲ್ಲಿ ವರ್ತಿಸುತ್ತವೆ ಎಂಬ ಅಂಶ ಇಂಥ ಪ್ರಯೋಗಗಳಿಂದ ಸ್ಥಿರಪಟ್ಟಿದೆ.

ಉದಾಹರಣೆಗೆ, ರಷ್ಯದ ವಿಜ್ಞಾನಿ ಐ.ಆರ್. ಪ್ಯಾವಲೋವ್ ನಾಯಿಗಳ ಮೇಲೆ ನಡೆಸಿರುವ ಪ್ರಯೋಗದ ಫಲಿತಾಂಶಗಳು ಕುತೂಹಲಕಾರಿಯಾಗಿವೆ. ಆತ ನಾಯಿಗಳಿಗೆ ಆಹಾರ ಕೊಡುವ ವೇಳೆಯಲ್ಲಿ ಮಾತ್ರವೆ ಗಂಟೆ ಬಾರಿಸಿ ಆಹಾರವನ್ನು ಅವುಗಳ ಎದುರು ಇಡುತ್ತಿದ್ದ, ಗಂಟೆ ಬಾರಿಸಿದ ಒಡನೆ ನಾಯಿ ಜೊಲ್ಲು ಸುರಿಸುವುದು ಸರ್ವೇಸಾಮಾನ್ಯವಾಯಿತು. ಸರಿ ಯಾವಾಗ ಗಂಟೆ ಬಾರಿಸಿದರೂ ನಾಯಿ ಜೊಲ್ಲು ಸುರಿಸುತ್ತಿತ್ತು. ಅನಂತರ ಈ ವರ್ತನೆಯ ವೇಳೆ ನಾಯಿಯ ದೇಹದ ಒಳಗೆ ನಡೆಯಬಹುದಾದ ಪ್ರತಿಕ್ರಿಯೆಯನ್ನು ಕುರಿತು ಸಂಶೋಧನೆ ನಡೆಸಿದಾಗ ಪಿಟ್ಯುಟರಿ ಗ್ರಂಥಿಯೇ ಈ ವರ್ತನೆಗೆ ಕಾರಣ ಎಂಬುದು ಪತ್ತೆಯಾಯಿತು. ಇಂಥ ನೂರಾರು ಪ್ರಯೋಗಗಳು ನಡೆದಿವೆ. ಆದರೆ ಒಂದು ಪ್ರಾಣಿ ವರ್ತಿಸಿದಂತೆ ಮತ್ತೊಂದು ಪ್ರಾಣಿ ವರ್ತಿಸುವುದಿಲ್ಲವಾದ್ದರಿಂದ ಯಾವುದೇ ವರ್ತನೆಯನ್ನು ಕುರಿತಂತೆ ಯಾವ ಒಂದು ಕಾರಣದ ಸಾರ್ವತ್ರೀಕರಣವೂ ಸಾಧ್ಯವಾಗಿಲ್ಲ. ಆದರೂ, ಪ್ರಾಣಿವರ್ತನೆಗೆ ಅದರ ದೇಹದಲ್ಲಿರುವ ಮುಖ್ಯ ಸೂಕ್ಷ್ಮಾಂಗಗಳು, ನರಗಳು ಮತ್ತು ಸ್ನಾಯುಗಳು ಇವುಗಳ ಕ್ರಿಯೆಯೇ ಕಾರಣ ಎಂಬುದು ಸಾಮಾನ್ಯವಾದ ಅಭಿಪ್ರಾಯ. ಪ್ರಾಣಿಗಳ ಅಂತರ್ಗತ ಹಾಗೂ ಸುವ್ಯವಸ್ಥಿತ ಸ್ವಾನುಭವ ಸ್ವಲ್ಪವೂ ವ್ಯತ್ಯಾಸಗೊಳ್ಳದೆ, ಅವುಗಳ ಮಸ್ತಿಷ್ಕದ ಸಂಘಟನೆಯ ರೂಪದಲ್ಲಿ ಅವುಗಳ ವರ್ತನೆ ಭೌತಿಕ ಕ್ರಿಯೆಗೆ ಸಂಬಂಧಿಸಿದುದು ಎನ್ನುವ ಅಭಿಪ್ರಾಯದ ಬಗ್ಗೆ ಸಹ ಹೆಚ್ಚು ಕಡಿಮೆ ಸರ್ವಾನುಮತವಿದೆ.

	ಪ್ರಾಣಿಗಳ ವರ್ತನೆಯನ್ನು ಅನುಸರಿಸಿ ಅವನ್ನು ಕೆಲವು ವರ್ಗಗಳಾಗಿ ವಿಂಗಡಿಸಬಹುದೇ ಎಂಬುದನ್ನು ಸಹ ಮನೋವಿಜ್ಞಾನಿಗಳು ಪರಿಶೀಲಿಸಿದ್ದಾರೆ. ಆದರೆ ಈ ದಿಶೆಯಲ್ಲಿ ಅನೇಕ ವಿರೋಧಾಭ್ಯಾಸ ಇರುವುದು ವ್ಯಕ್ತವಾಗಿದೆ. ಏಕೆಂದರೆ ಒಂದೇ ಗುಂಪಿಗೆ ಸೇರಿದ ಪ್ರಾಣಿಗಳಲ್ಲಿ ಒಂದೇ ರೀತಿಯದಾಗಿಲ್ಲ. ಅಲ್ಲದೆ, ಪ್ರಯೋಗ ಶಾಲೆಯಲ್ಲಿ ನಿರ್ದಿಷ್ಟ ಪ್ರಯೋಗಗಳ ಮೂಲಕ ಮಾತ್ರ ಪ್ರಾಣಿವರ್ತನೆಯನ್ನು ಗಮನಿಸುವುದರಿಂದ ಅದರ ಸಾರ್ವತ್ರೀಕರಣ ಸಾಧ್ಯವಿಲ್ಲ.

	ಪ್ರಾಣಿವರ್ತನೆಗೆ ಬಹುಶಃ ಕಲಿಕೆಯೇ ಕಾರಣವೆಂಬುದು ಪ್ರಾಯೋಗಿಕ ಅಧ್ಯಯನಗಳ ಮೂಲಕ ಸ್ಥಿರಪಟ್ಟಿರುವ ಮತ್ತೊಂದು ಅಂಶ. ಪ್ರಾಣಿಗಳ ವ್ಯಕ್ತಿತ್ವದಲ್ಲಿ ಕಲಿಕೆ ಅಧಿಕವಾಗಿದ್ದು ಇದರ ಅಭಿವ್ಯಕ್ತಿಗೆ ಅನುಕೂಲವಾದ ಸನ್ನಿವೇಶ ದೊರೆತಾಗ ಅವುಗಳ ವರ್ತನೆಯ ಮೂಲಕ ಪ್ರಕಟಗೊಳ್ಳುತ್ತದೆ. ಕಲಿಕೆಯ ಬಗ್ಗೆ ಅಸಂಖ್ಯಾತ ಪ್ರಯೋಗಗಳು ನಡೆದಿವೆ. ಕೆಲವು ಪ್ರಯೋಗಗಳು ಕಲಿಕೆಯ ಪ್ರತಿಕ್ರಿಯೆಯಲ್ಲಾಗುವ ಶಾರೀರಿಕ ಅಥವಾ ನರಮಂಡಲದ ಬದಲಾವಣೆಗೆ ಸಂಬಂಧಿಸಿವೆಯಾದರೆ ಮತ್ತೆ ಕೆಲವು ಪರಿಸರದಲ್ಲಿ ಉಂಟಾಗುವ ವ್ಯತ್ಯಾಸದಿಂದ ಪ್ರಾಣಿಗಳು ಹೇಗೆ ಕಲಿಯುತ್ತವೆ ಎನ್ನುವುದಕ್ಕೆ ಸಂಬಂಧಿಸಿವೆ. ಪ್ರಾಣಿಗಳ ಜ್ಞಾನೇಂದ್ರಿಯಗಳಿಂದ ಉಂಟಾಗುವ ಅನುಭವಗಳಿಗೂ ಪ್ರತಿಕ್ರಿಯೆಯನ್ನು ತೋರಿಸುವುದಕ್ಕಾಗಿ ಉಂಟಾಗುವ ಶಾರೀರಿಕ ಆವೇಗಕ್ಕೂ ಸಂಬಂಧಿಸಿದೆ ಎಂಬ ಅಂಶ ಇಂಥ ಪ್ರಯೋಗಗಳಿಂದ ಸ್ಥಿರಪಟ್ಟಿದೆ. ಇದೇ ರೀತಿ ಸರ್ವಸಮ್ಮತವಾದ ಇನ್ನೊಂದು ಸಿದ್ಧಾಂತವೆಂದರೆ ಪ್ರಾಣಿವರ್ತನೆಗೂ ಪ್ರೇರಣೆಗೂ ಇರುವ ಸಂಬಂಧ. ಪ್ರೇರಣೆ ದೊರೆತಾಗಲೆಲ್ಲ ಪ್ರಾಣಿಗಳು ನಿರ್ದಿಷ್ಟ ರೀತಿಯಲ್ಲಿ ವರ್ತಿಸುತ್ತವೆಂಬುದು ಕೂಡ ಸ್ಥಿರಪಟ್ಟಿದೆ.

	ಪ್ರಾಣಿಗಳ ವರ್ತನೆ ಹೊರಗಿನ ಪರಿಸರದಿಂದ ಬದಲಾಗುವಂತೆಯೇ, ಪ್ರೇರಣೆ ಮತ್ತು ರಾಸಾಯನಿಕಗಳ ಬಳಕೆಯಿಂದಲೂ ಬದಲಾಗುತ್ತದೆ. ರಾಸಾಯನಿಕಗಳ ಪರಿಮಾಣ, ಅದನ್ನು ಪ್ರಾಣಿಗಳ ದೇಹಕ್ಕೆ ಸೇರಿಸುವ ಕಾಲ ಮತ್ತು ಸೇರಿಸುವ ರೀತಿಯನ್ನು ಅನುಸರಿಸಿ ಪ್ರಾಣಿಗಳ ವರ್ತನೆಯಲ್ಲಿ ವ್ಯತ್ಯಾಸಗಳುಂಟಾಗುವುದು ಕಂಡುಬಂದಿದೆ.

	ಪ್ರಾಣಿಗಳ ಲೈಂಗಿಕ ವರ್ತನೆಯನ್ನು ಕುರಿತು ಸಹ ಅನೇಕ ಪ್ರಯೋಗಗಳು ನಡೆದಿವೆ. ರಾಸಾಯನಿಕ ಮೂಲಕ ಅವುಗಳ ವರ್ತನೆಯನ್ನು ಅಭ್ಯಸಿಸಲಾಗಿದೆ. ಆದರೆ ಇಂಥ ಪ್ರಯೋಗಗಳಿಂದ ಪ್ರಾಣಿಗಳೂ ಸ್ವಾಭಾವಿಕ ಪರಿಸರದಲ್ಲಿ ನಡೆಸುವ ಲೈಂಗಿಕ ವರ್ತನೆಯ ಬಗ್ಗೆ ಅರಿಯುವುದು ಸಾಧ್ಯವಾಗಿಲ್ಲವೆಂಬುದು ಸ್ಪಷ್ಟ. 

	ಮೇಲಿನ ವಿವರಣೆಗಳಿಂದ ಅನೇಕ ಅಂಶಗಳು ಸ್ಪಷ್ಟವಾಗುತ್ತವೆ. ಪ್ರಾಣಿವರ್ತನೆಯನ್ನು ಕುರಿತು ನಡೆದಿರುವ ಇದುವರೆಗಿನ ಸಂಶೋಧನೆಗಳು ಹೊಸ ಸಂಶೋಧನೆಗಳಿಗೆ ವಿಶಾಲ ತಳಹದಿಯನ್ನು ಹಾಕಿವೆಯಾದರೂ ಈ ವಿಚಾರದ ಬಗ್ಗೆ ನಿರ್ದಿಷ್ಟವಾಗಿ ಏನನ್ನೂ ಹೇಳುವುದಕ್ಕೆ ಸಾಧ್ಯವಾಗಿಲ್ಲ. ಬೇರೆ ಬೇರೆ ವಿಜ್ಞಾನಿಗಳು ಬೇರೆ ಬೇರೆ ತೀರ್ಮಾನಗಳಿಗೆ ಈ ಬಗ್ಗೆ ಬಂದಿದ್ದಾರೆ. ಜೀವವಿಜ್ಞಾನ, ಮನೋವಿಜ್ಞಾನ, ಪರಿಸರ ವಿಜ್ಞಾನಗಳು ಪ್ರಾಣಿವರ್ತನೆಯ ಬಗ್ಗೆ ವ್ಯಾಪಕ ಸಂಶೋಧನೆಗೆ ಎಡೆಮಾಡಿ ಕೊಟ್ಟಿವೆ. ಈ ವಿಭಾಗಗಳಲ್ಲಿ ಬೆಳೆವಣಿಗೆಗಳು ನಡೆಯುತ್ತ ಬಂದಂತೆ ಪ್ರಾಣಿವರ್ತನೆಯ ಬಗ್ಗೆಯೂ ಜಟಿಲ ಸಮಸ್ಯೆಗಳು ಹುಟ್ಟಿಕೊಂಡಿವೆ. ಪ್ರಾಣಿವರ್ತನೆ ಸ್ವಭಾವಜನ್ಯವಾದದ್ದೇ ವಿಕಾಸಸ್ವರೂಪದ್ದೇ ಎನ್ನುವುದು ಖಚಿತವಾಗಿಲ್ಲ. ವಿಕಾಸಯುತವಾದದ್ದೆಂದು ಅಭಿಪ್ರಾಯ ಪಡುವ ವಿಜ್ಞಾನಿಗಳು, ಪ್ರಾಣಿವಿಕಾಸಕ್ಕೆ, ವರ್ತನ ವಿಕಾಸವನ್ನು ಸಂಬಂಧಿಸುತ್ತಾರೆ. ಅತ್ಯಂತ ಹೆಚ್ಚಿನ ನರಮಂಡಲವನ್ನು ಪಡೆದಿರುವ ಪ್ರಾಣಿಗಳಲ್ಲಿ ನಿರ್ದಿಷ್ಟ ಸ್ವರೂಪದ ವರ್ತನೆಗಳು ವ್ಯಕ್ತವಾಗುತ್ತವೆ ಎಂಬ ಸಿದ್ಧಾಂತ ಸಹ ಬೆಳಕಿಗೆ ಬಂದಿದೆ. ಹಾಗೆಯೆ ಕಡಿಮೆ ನರಮಂಡಲಗಳಿರುವ ಪ್ರಾಣಿಗಳಲ್ಲಿ ವರ್ತನೆ ಸರಳ ರೂಪದ್ದಾಗಿದೆ ಎಂಬ ಸಿದ್ಧಾಂತ ಸಹ ಪ್ರಚಲಿತವಾಗಿದೆ.

	ಪ್ರಾಯೋಗಿಕ ಸಿದ್ಧಾಂತಗಳು ಅತ್ಯಂತ ಹೆಚ್ಚಿನ ಮಿತಿಯನ್ನು ಹೊಂದಿವೆ ಎಂದೇ ಅವನ್ನು ಆಧಾರವಾಗಿಟ್ಟುಕೊಂಡು ಪ್ರಾಣಿಗಳ ವರ್ತನೆಯನ್ನು ಅರಿತುಕೊಳ್ಳುವುದು ಪೂರ್ಣವಾಗಿ ಸಾಧ್ಯವಾಗಿಲ್ಲ. ಹಾಗೆಯೇ ಅನೇಕ ಕ್ರೂರ ಜಂತುಗಳು ಮತ್ತು ಪ್ರಾಣಿಗಳು ಪ್ರಯೋಗಕ್ಕೆ ಲಭ್ಯವಲ್ಲದ್ದರಿಂದ ಅವುಗಳೊಡನೆ ಪ್ರಯೋಗ ಸಾಧ್ಯವಾಗಿಲ್ಲ. ಇಂಥ ಸಂದರ್ಭಗಳಲ್ಲಿ ಕೇವಲ ಅವುಗಳ ನಡತೆಯನ್ನು ಅನೇಕ ಬಾರಿ ಗಮನಿಸುವುದರ ಮೂಲಕ, ಅವುಗಳ ವರ್ತನೆಯನ್ನು ಅರಿತುಕೊಳ್ಳಬಹುದು ಅಷ್ಟೇ. ಪ್ರಾಣಿಗಳಂತೆಯೇ ವರ್ತಿಸುತ್ತ, ಅವುಗಳೊಡನೆ ಸಹಜೀವನ ನಡೆಸಿ ಅವುಗಳ ವರ್ತನೆಯ ಬಗ್ಗೆ ಬೆಳಕು ಚೆಲ್ಲುವ ಯತ್ನಗಳು ನಡೆದಿದ್ದರೂ ಅವುಗಳಿಂದ ಸಾಧಿತವಾಗಿರುವುದು ಅಲ್ಪ. ಏಕೆಂದರೆ ಎಲ್ಲ ಪ್ರಾಣಿಗಳು ಮಾನವರನ್ನು ಸಹಚರರನ್ನಾಗಿ ಸ್ವೀಕರಿಸುವುದಿಲ್ಲ.
	ಮೇಲಿನ ಮಿತಿಗಳಿದ್ದರೂ ಪ್ರಾಣಿ ವರ್ತನೆಯ ಬಗ್ಗೆ ಸಂಶೋಧನೆಗಳು ಬಹಳ ಮುಂದುವರಿದಿವೆ ಎಂಬುದನ್ನು ಒಪ್ಪಿಕೊಳ್ಳಬಹುದಾದರೂ ಪ್ರಾಣಿ ಪ್ರಪಂಚ ಅತ್ಯಂತ ನಿಗೂಢವಾದ್ದರಿಂದ ಮತ್ತು ಸಂಖ್ಯೆಯ ದೃಷ್ಟಿಯಿಂದ ಪ್ರಾಣಿಗಳು ಅಗಣಿತವಾಗಿರುವುದರಿಂದ ಈ ಕ್ಷೇತ್ರದಲ್ಲಿ ಇದುವರೆಗೆ ದೊರೆತಿರುವ ಫಲಿತಾಂಶಗಳು ಗೌಣವೆಂದೇ ಹೇಳಬಹುದು.
(ಎಂ.ಎನ್.ವಿ.ಐ.)

	ವಸಂತ ಕಾಲದ ಪ್ರಾರಂಭಕ್ಕೆ ಕೇಳಿಬರುವ ಕೋಗಿಲೆಯ `ಕುಹೂ ಕುಹೂ ಹಕ್ಕಿಗಳು ಗೂಡುಗಟ್ಟಿ, ಮೊಟ್ಟೆಗೆ ಕಾವು ಕೊಡುವುದು, ಮರಿಗಳಿಗೆ ಗುಟುಕು ನೀಡುವುದು, ಹಕ್ಕಿಗಳ ವಲಸೆ, ಸಾಕಿದ ನಾಯಿ ಮತ್ತು ಬೆಕ್ಕುಗಳು ತೋರುವ ವೈವಿಧ್ಯಮಯ ಪ್ರತಿಕ್ರಿಯೆಗಳು, ರಾತ್ರಿಯ ವೇಳೆಯಲ್ಲಿ ಚಟುವಟಿಕೆ ತೋರುವ ಜಿರಲೆ, ಇಲಿಗಳು ಶಿಸ್ತಿನ ಸಿಪಾಯಿಗಳಂತೆ ಸಾಗುವ ಇರುವೆಗಳು - ಹೀಗೆ ಹತ್ತು ಹಲವಾರು ಚಟುವಟಿಕೆಗಳನ್ನು ನಮ್ಮ ಸುತ್ತಮುತ್ತ ದಿನನಿತ್ಯ ಗಮನಿಸಿದರೂ ಅದರ ವಿಶ್ಲೇಷಣೆಯ ಬಗೆಗೆ ತಲೆ ಕೆಡಿಸಿಕೊಳ್ಳುವುದು ಅಪರೂಪ. ಇಂತಹ ಸಾವಿರಾರು ಚಟುವಟಿಕೆಗಳು, ಸ್ಪಂದನಗಳನ್ನು ಗಮನಿಸಿ, ದಾಖಲಿಸಿ, ವಿಶ್ಲೇಷಿಸುವ ಅಧ್ಯಯನವೇ ಪ್ರಾಣಿಗಳ ವರ್ತನೆ (ಂಟಿimಚಿಟ behಚಿviouಡಿ).

	ಇಂತಹ ಅಧ್ಯಯನಕ್ಕೆ ಜೀವಶಾಸ್ತ್ರಜ್ಞ ಆಗಬೇಕಿಲ್ಲ. ತಾಳ್ಮೆ ಮತ್ತು ಸೂಕ್ಷ್ಮವೀಕ್ಷಣೆಯ ಹವ್ಯಾಸ ಬೆಳೆಸಿಕೊಂಡಲ್ಲಿ ಜೀವ ಜಗತ್ತಿನ ನಿಗೂಢಗಳನ್ನು ಅನುಭವಿಸಬಹುದು. ಇಂದು ಜೀವವಿಜ್ಞಾನಿ, ಮನೋವಿಜ್ಞಾನಿ, ಪರಿಸರ ತಜ್ಞರೇ ಈ ಅಧ್ಯಯನಕ್ಕೆ ಸಾಕಷ್ಟು ವಿಷಯ ಸಂಗ್ರಹಣೆಗಳಾಗಿವೆ ವೈಜ್ಞಾನಿಕ ಉಪಕರಣಗಳ ವಿಕಾಸವಾದಂತೆ ಈ ನಿಟ್ಟಿನ ಸಂಶೋಧನೆ ಮಾಹಿತಿಗಳು ಕೋಶ............ ಅಣುವಿನ ವಿವರಿಸುವ ಹಂತ ಮುಟ್ಟಿದೆ. ಕ್ಯಾಮರಾ, ವೀಡಿಯೋ, ರೇಡಿಯೋ ಕಾಲರ್ ಟೆಲಿಮೆಟ್ರಿ, ಧ್ವನಿಮುದ್ರಣ ಮುಂತಾದ ಸಲಕರಣೆಗಳಿಂದ ಹೊಸ ಹೊಸ ವಿಚಾರಗಳು ಬೆಳಕಿಗೆ ಬಂದಿವೆ. ಒಟ್ಟಿನಲ್ಲಿ ವಂಶವಾಹಿ ಆಓಂ ಮತ್ತು ಪರಿಸರದ ಆಗುಹೋಗುಗಳ ಪರಸ್ಪರ ಸ್ಪಂದನವೇ ವರ್ತನೆಗಳಿಗೆ ಕಾರಣವೆಂಬ ಮನೋವೈಜ್ಞಾನಿಕ ಸತ್ಯದ ಅರಿವಾಗಿದೆ ಈ ಅಧ್ಯಯನಕ್ಕೆ ಇಣhoಟogಥಿ ಹೊಸ ಶಾಖೆಯಾಗಿ ಜೀವನ ನಿಗೂಢಗಳನ್ನು ಬಿಚ್ಚಿಡುವ ಹೊಸ ರೂಪ ತಾಳಿದೆ. 

	ಪ್ರಾಣಿ ವರ್ತನೆಗೆ ಮಾನವ ಉಗಮವಾದಂದಿನಿಂದಲೂ ಗಮನಿಸುತ್ತಲೇ ಬಂದಿದ್ದಾನೆ. ಕಾಡುಮೇಡುಗಳಲ್ಲಿ ಅಲೆಯುತ್ತಿದ್ದ ಆದಿ ಮಾನವನ ಒಡನಾಟ ಪ್ರಾಣಿಗಳೊಂದಿಗೇ ಇದ್ದದ್ದರಿಂದ ಅವುಗಳನ್ನು ನಿಕಟವಾಗಿ ಅರ್ಥಮಾಡಿಕೊಂಡಿದ್ದನೆಂಬ ಸಾಕ್ಷಿ ಅವನು ವಾಸಿಸುವುದು ಗುಹೆಗಳಲ್ಲಿನ ಚಿತ್ರಕಲೆಗಳಿಂದ ಊಹಿಸಬಹುದಾಗಿದೆ. .............ವಿವರಗಳನ್ನು 3ನೇ ಶತಮಾನದಲ್ಲೆ ಗ್ರೀಕ್ ತತ್ವಜ್ಞಾನಿ ಅರಿಸ್ಟಾಟಲ್ ತನ್ನ “ಹಿಸ್ಟೋರಿಯಾ ಅನಿಮೇಯ” ಪುಸ್ತಕದಲ್ಲಿ ವಿವರಿಸಿದ್ದಾನೆ. ಪ್ರಾಣಿಗಳಿಗೂ ತಿಳುವಳಿಕೆ, ಮಮತೆ, ಪ್ರೀತಿ ಇರುವುದನ್ನು ಈ ಪುಸ್ತಕದಲ್ಲಿ ಚರ್ಚಿಸಲಾಗಿದೆ. ಕ್ರಿ.ಶ 1840ರಲ್ಲಿ ಗ್ಯಾಲನ್ ತನ್ನ ಕೃತಿಯಲ್ಲಿ ಪ್ರಾಣಿಗಳ ವರ್ತನೆಗಳ ಸುದೀರ್ಘ ವರ್ತನೆಗಳನ್ನು ವಿವರಿಸಿದ ಕೀರ್ತಿ ಜೀವ ವಿಕಾಸದ ಪಿತಾಮಹ ಚಾಲ್ರ್ಸ್ ಡಾರ್ವಿನ್‍ಗೆ ಸಲ್ಲುತ್ತದೆ.

	ನಂತರ 1882ರಲ್ಲಿ ಎohಟಿ ಖomಚಿಟಿes ಬರೆದ ಂಟಿimಚಿಟ iಟಿಣeಟಟigeಟಿಛಿe (ಪ್ರಾಣಿಗಳ ಬುದ್ದಿವಂತಿಕೆ ಹಾಗೂ ಜರ್ಮನಿಯ ಪ್ರಾಣಿಶಾಸ್ತ್ರಜ್ಞ ಆಸ್ಕರ್ ಹೈನ್‍ರಾಕ್ *1871-1945) ಬಾತು ಕೋಳಿಗಳ ಮೇಲೆ ಬರೆದಿರುವ “ಇಣhoಟogಥಿ oಜಿ ಂಟಿಚಿಣiಜಚಿe” (ಅನಾಟಿಡೆ ಬಾತುಕೋಳಿ ಕುಟುಂಬ)ಗಳ ವರ್ತನೆಗಳು, ಕುತೂಹಲಕಾರಿ ವಿಷಯಗಳನ್ನು ಹೊರಗೆಡುತ್ತವೆ.

	ಇಣhoಟogಥಿ ಅಧ್ಯಯನ ಮನರಂಜನೆಯನ್ನು ಒದಗಿಸುವುದರಿಂದ ಜನಪ್ರಿಯ ವಿಜ್ಞಾನ ಶಾಖೆಯಾಗಿ ಬೆಳೆದು ಬಂದದ್ದು 1972ರಿಂದೀಚೆಗೆ, ಈ ಜನಪ್ರಿಯತೆಯ ಕಾರಣ 1972ರ ನೊಬೆಲ್ ಪ್ರಶಸ್ತಿ ಪಡೆದ ಮೂವರು ಪ್ರಾಣಿ ನಡೆವಳಿಕೆ ತಜ್ಞರ ... ಮನೋವಿಜ್ಞಾನಿ ಕೊನ್‍ರಾಡ್ ಲೋರೆಂeóï, ಹಾಲೆಂಡಿನ ಪ್ರಾಣಿಶಾಸ್ತ್ರಜ್ಞ ನಿಕೋಟಿನ್‍ಬೆರ್ಜೆನ್ ಮತ್ತು ಜರ್ಮನಿಯ ಕಾರ್ಲ್‍ಫಾನ್ ಫ್ರಿಶ್.

	ಕೊನ್‍ರಾಡ್ ಲೋರೆಂeóï (1903-1989)ನನ್ನು ಪ್ರಾಣಿವರ್ತನಾ ಶಾಸ್ತ್ರದ ಪಿತಾಮಹನೆಂದೇ ಪರಿಗಣಿಸಲಾಗಿದೆ. ಈತ ಆಸ್ಟ್ರಿಯಾದ ವಿಯೆನ್ನಾ ವಿಶ್ವವಿದ್ಯಾಲಯದಲ್ಲಿ ಪ್ರಾಣಿ ಮನೋವಿಜ್ಞಾನ ಅಧ್ಯಾಪಕ ಹಾಗೂ “ಇಣhoಟogಥಿ oಜಿ ಂಟಿಚಿಣiಜಚಿe” ಪುಸ್ತಕವನ್ನು ಬರೆದ ಆಸ್ಕರ್ ಹೈನ್‍ರಾತ್‍ನ ಶಿಷ್ಯ. ಈಗ ಪಶುಪಾಲನಾ ಕೇಂದ್ರದಲ್ಲೇ ವಾಸಿಸುತ್ತಾ ಸುತ್ತಮುತ್ತಲಿನ ಕಪ್ಪೆ, ಕೋತಿ, ನಾಯಿ, ಕಾಗೆ, ಬಾತುಕೋಳಿ ಮುಂತಾದ ಪ್ರಾಣಿ, ಪಕ್ಷಿಗಳನ್ನು ನಿಷ್ಠೆಯಿಂದ ಗಮನಿಸುತ್ತಿದ್ದ. ಈತ ಬಾತುಕೋಳಿಗಳ ಮೇಲೆ ನಡೆಸಿದ ಪ್ರಯೋಗ ಜನಪ್ರಿಯತೆಗಳಿಸಿತು. ಬಾತುಕೋಳಿಗಳಲ್ಲಿ ಮೊಟ್ಟೆಯೊಡೆದು ಹೊರಬಿದ್ದ ಮರಿಗಳು ತಾಯಿಯ ಹಿಂದೆ ಹೋಗುವುದು ಸಾಮಾನ್ಯ. ಹುಟ್ಟಿದ ಮರಿಗಳನ್ನು ತಾಯಿಯಿಂದ ಬೇರ್ಪಡಿಸಿ ಅದರ ಜಾಗದಲ್ಲಿ ಬಂದು ನಡೆದಾಡುವ ಗೊಂಬೆಯನ್ನು ಪರಿಚಯಿಸಿದಾಗ, ಆ ಮರಿಗಳು ಆಗೊಂಬೆಯ ಹಿಂದೆಯೇ ಹೋಗುವುದನ್ನು ಗಮನಿಸಿದ. ನಂತರ ತಾನೇ ಅವುಗಳ ಮುಂದೆ ನಡೆದಾಡಿದಾಗ ಅವನನ್ನೇ ಅವು ತಾಯಿಯೆಂದು ಭ್ರಮಿಸಿ ಹಿಂದೆ ಹೋದವು. ಅಂದರೆ ಮರಿಗಳು ಜೀವ/ನಿರ್ಜೀವ ಯಾವುದೇ ಚಲನ ವಸ್ತುಗಳ ಹಿಂದೆ ಹೋಗುವ ಪ್ರಕ್ರಿಯೆ ತೋರುವುದೆಂದು ಅರ್ಥೈಸಿದ. ಇಂತಹ ನಡವಳಿಕೆ ಹುಟ್ಟಿನಿಂದಲೇ ಛಾಪುಗೊಂಡಿರುವುದಾಗಿ ದೃಢಪಟ್ಟಿತು. ಮರಿಗಳ ಈ ನಡವಳಿಕೆಯನ್ನು ಒಂದು ನಿರ್ದಿಷ್ಟ ಅವಧಿಯೊಳಗೆ ಮಾತ್ರ ತೋರಬಲ್ಲದೆಂದು ಆ ಅವಧಿ ಕಳೆದ ನಂತರ ಚಲನಾ ವಸ್ತು ಪರಿಚಯಿಸಿದಲ್ಲಿ ಅಂತಹ ಪ್ರಕ್ರಿಯೆ ತೋರಲಾರದೆಂದೂ ತಿಳಿದು ಬಂತು. ಈ ಅವಧಿಯನ್ನು “ನಿಶ್ಚಿತ ಅವಧಿ” (ಅಡಿiಣiಛಿಚಿಟ Peಡಿioಜ) ಎಂದು ಪರಿಗಣಿಸಿದ್ದಾನೆ. Sಣiಛಿಞಟe bಚಿಛಿಞ ಎಂಬ ಮೀನಿನ ಲೈಂಗಿಕ ಪ್ರಚೋದನೆ ಮತ್ತು ಹೆರ್ರಿಂಗ್‍ಗಲ್‍ಗಳಲ್ಲಿ ಮರಿ ತಾಯಿಯಾದ ನಡುವಣ ಆಹಾರ ಸೇವಿಸುವ ಪ್ರಕ್ರಿಯೆಗಳು ಕುತೂಹಲಕಾರಿ ಪ್ರಯೋಗಗಳಾಗಿವೆ.

	 ಜೇನುನೋಣಗಳು ನಡೆಸುವ ನೃತ್ಯದ ಪರಿಭಾಷೆಯಿಂದ ಕಾರ್ಲ್ ಫಾನ್ ಫ್ರಿಷ್ (1886-1982) ಮಧು ಸಂಗ್ರಹಣೆಯ ವಿಳಾಸವನ್ನು ಪ್ರದರ್ಶಿಸುವುದಾಗಿ ವಿವರಿಸಿದ. ಕೀಟಗಳು ವಿವಿಧ ಗತಿ, ಭಂಗಿಗಳಲ್ಲಿ ಹಾರಾಡುವುದನ್ನು ಎಲ್ಲರೂ ನೋಡಿದ್ದೇವೆ. ಆದರೆ ಈ ಗತಿ, ಭಂಗಿಗಳು ಪರಸ್ಪರ ವಿಚಾರ ವಿನಿಮಯ ಮತ್ತು ಸಂಭಾಷಣೆಗಾಗಿ ಬಳಸುವುದೆಂಬುದು ಆಶ್ಚರ್ಯಕರ. ಸಂಗ್ರಹಕಾರ ಜೇನ್ನೋಣಗಳು ಮಧುವನ್ನು ಸಂಗ್ರಹಿಸಿಕೊಂಡು ಗೂಡಿಗೆ ಮರಳಿ ಬಂದು ತಮ್ಮ ಇತರ ಸಂಗ್ರಹಕಾರ ಮಿತ್ರರಿಗೆ ಮಧು ಸಿಗುವ ಸ್ಥಳವನ್ನು ಸಾಂಕೇತಿಕ ಭಾಷೆಯಲ್ಲಿ ತಿಳಿಸುವುದಾಗಿಯೂ ಹಾಗೂ ಅದು ದೊರೆಯುವ ಸ್ಥಳದ ದೂರ ಮತ್ತು ದಿಕ್ಕನ್ನು ತಿಳಿಸಲು ಬೇರೆ ಬೇರೆ ಬಗೆಯ ನೃತ್ಯ ನಡೆಸುವುದಾಗಿಯೂ ಅರ್ಥೈಸಲಾಗಿದೆ.

	ಮಧು ಸಂಗ್ರಹಣಾ ಸ್ಥಳ ಪ್ರದೇಶ ಸಮೀಪವೇ ಇದ್ದರೆ ಅವು ಗೂಡಿನ ಬಳಿ ಪೂರ್ಣ ಚಂದ್ರಾಕಾರವಾಗಿ ನೃತ್ಯ ನಡೆಸುವ ಹಾರಾಟ ತೋರುತ್ತವೆ. ಸಂಗ್ರಹಣ ಪ್ರದೇಶ ದೂರವಿದ್ದಲ್ಲಿ ಅರ್ಧ ಚಂದ್ರಾಕಾರವಾಗಿ ನೃತ್ಯ ನಡೆಸುತ್ತದೆ. ಮಧು ಸಂಗ್ರಹಣ ಪ್ರದೇಶ ಗೂಡಿನಿಂದ ಯಾವ ದಿಕ್ಕಿನಲ್ಲಿದೆ ಎಂದು ತಿಳಿಸಲು ಮತ್ತೊಂದು ಬಗೆಯ ಭಂಗಿಯಲ್ಲಿ ಪ್ರದರ್ಶಿಸುವುದು, ಗೂಡಿನ ಬಳಿ, ಕೆಳಗಿನಿಂದ ಮೇಲಕ್ಕೆ ತನ್ನ ಹೊಟ್ಟೆಯ ಭಾಗವನ್ನು ಬಲ-ಎಡಭಾಗಗಳಿಗೆ ವಾಲಿಸಿ ಶೀಘ್ರಗತಿಯಲ್ಲಿ ನೃತ್ಯ ಮಾಡಿದ ಅದು ಸೂರ್ಯನಿರುವ ದಿಕ್ಕಿಗಿದೆ ತೋರುತ್ತದೆ. ಗೂಡಿನ ಬಳಿ ಮೇಲು ಭಾಗದಿಂದ ಕೆಳಕ್ಕೆ ತನ್ನ ಹೊಟ್ಟೆಯನ್ನು ಎರಡೂ ಕಡೆಗಳಿಗೆ ಬಾಗಿಸುತ್ತಾ ನೃತ್ಯವೆಸಗಿದರೆ ಸೂರ್ಯನ ವಿರುದ್ಧ ದಿಕ್ಕಿಗೆ ಮಾಡಿದ್ದಲ್ಲಿ ಸೂರ್ಯ ಮತ್ತು ಜೇನುಗೂಡಿನ ನೇರಕ್ಕೆ 600 ಕೋನದಲ್ಲಿ ಮೇಲಿನ ಮೂಲೆಗೆ ನೃತ್ಯ ಮಾಡುವ ಹಾರಾಟ ತೋರಿದರೆ ಸೂರ್ಯನ ಬಲಭಾಗಕ್ಕೆ ಸುಮಾರು 600 ಕೋನದಲ್ಲಿ ಮಧು ಸಂಗ್ರಹಣ ಸ್ಥಳವಿರುವುದೆಂದು ಸೂಚಿಸುತ್ತದದೆ. ಹೀಗೆ ಗಣಿತೀಯ ಪರಿಭಾಷೆಗಳನ್ನು ತಮ್ಮ ಪೂರ್ಣ ಚಂದ್ರಾಕಾರ ಮತ್ತು ತಮ್ಮ ಹೊಟ್ಟೆಯ ಅಲ್ಲಾಟದ ಭಂಗಿಯಿಂದ ದೂರ ಮತ್ತು ದಿಕ್ಕನ್ನು ಸೂಚಿಸುವುದು. ಈ ಸಾಂಕೇತಿಕ ಭಾಷೆಗಳಿಂದ ಮಧು ಸಂಗ್ರಹಣಾ ಪ್ರಮಾಣವನ್ನು ಸೂಚಿಸಬಲ್ಲದೆಂದೂ ವಿವರಿಸಲಾಗಿದೆ.

	ನಿಕೋ ಟಿನ್‍ಬರ್ಜನ್ (1907) ತೋಡು ಕಣಜದ ಸೂಕ್ಷ್ಮ ಮತ್ತು ತೀಕ್ಷ್ಣ ಗುರುತಿನ ಸ್ಮರಣ ಶಕ್ತಿಯ ಬಗೆಗೆ ಪ್ರಾಯೋಗಿಕ ನಿದರ್ಶನ ನೀಡಿದ್ದಾನೆ.

	ಪ್ರಾಣಿ ವರ್ತನೆಯ ಬಗೆಗೆ ಮಾಡಿರುವ ಮತ್ತೊಂದು ಉತ್ತಮ ನಿದರ್ಶನ ನಾಯಿಗಳ ಮೇಲೆ ರಷ್ಯಾದ ಶರೀರಶಾಸ್ತ್ರಜ್ಞ ಇವಾನ್ ಪೆಟ್ರೋವಿಚ್ ಪಾವಲೋವ್ ನಡೆಸಿದ ಬಾಹ್ಯಪ್ರಭೇದ ಪ್ರತಿಕ್ರಿಯೆ.

	ಅನೇಕ ಪ್ರತಿಕ್ರಿಯೆಗಳು ಹುಟ್ಟಿನಿಂದ ಅನುವಂಶಿಕವಾಗಿ ಬಂದಿರುತ್ತವೆ. ಇವು ಸಹಜ ಪ್ರತಿಕ್ರಿಯೆಗಳು. ಕೆಲವೊಂದು ರೂಢಿಗೊಳಿಸಿಕೊಂಡ ಪ್ರತಿಕ್ರಿಯೆಗಳಾಗಿರುತ್ತವೆ. ನಿಮ್ಮ ನೆಚ್ಚಿನ ಸಿಹಿ ಪದಾರ್ಥವನ್ನು ನೆನೆಪಿಸಿಕೊಂಡಾಗಲೇ ಲಾಲಾರಸ ಸುರಿಸಬಲ್ಲ ಪ್ರತಿಕ್ರಿಯೆ.

	ನಾಯಿಗೆ ಆಹಾರ ನೀಡುವ ಮೊದಲಿಗೆ ಪಾವ್‍ಲೋವ್ ಗಂಟೆ ಬಾರಿಸುತ್ತಿದ್ದ. ಪ್ರತಿದಿನ ಗಂಟೆ ಬಾರಿಸಿದ ಕೂಡಲೇ ಜೊಲ್ಲು ಸುರಿಸುವ ನಾಯಿ ಆಹಾರದೆಡೆಗೆ ಬರುತ್ತಿತ್ತು. ಗಂಟೆಯ ಸದ್ದು ಮತ್ತು ಆಹಾರಕ್ಕೆ ನಂಟು ಬೆಳೆಸಿಕೊಂಡ ನಾಯಿ ಆಹಾರ ಕಾಣದಿದ್ದರೂ ಗಂಟೆಯ ಸದ್ದಿಗೆ ಜೊಲ್ಲು ಸುರಿಸುವುದನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಿದ.

	ಚಿಂಪಾಜಿಗಳ ತಿಳುವಳಿಕೆಯ ಜ್ಞಾನ, ಅವು ಸ್ಪಂದಿಸುವ ಮತ್ತು ಕಲಿಯುವ ಅನೇಕ ವಿಧವಾದ ಪ್ರಯೋಗಗಳ ಫಲಿತಾಂಶಗಳು ಇಂದು ಲಭ್ಯವಿದೆ.

	ವಿಶೇಷವಾಗಿ ಅನೇಕ ಪ್ರಾಣಿ, ಪಕ್ಷಿ, ಮೀನು ಕೀಟ ಮತ್ತಿತರ ಜೀವಿಗಳಲ್ಲಿ ಲೈಂಗಿಕ ಪ್ರಚೋದನೆ, ಮಮತೆ, ಪ್ರೀತಿಯ ಬಗೆಗಿನ ಅಧ್ಯಯನಗಳು ನಡೆದಿವೆ.

	ಜಪಾನಿನ ಸುಸುಮ ಓನೋ ಎಂಬ ವಿಜ್ಞಾನಿ ರಾಸಾಯನಿಕ ಹಂತದಲ್ಲಿ ಜೀವದ ವಿವರಣೆ ನೀಡುವ ಹೊಸ ತಿರುವನ್ನು ನೀಡಿದ್ದಾನೆ. ಈತ ಡ್ಯು ಆರ್ಟೆಯಲ್ಲಿನ ಬೆಕ್‍ಮನ್ ರೀಸರ್ಚ್ ಇನ್ಸಿಟ್ಯಾಲ್ನಲ್ಲಿ ನಡೆಸುತ್ತಿರುವ ಅಧ್ಯಯನದಲ್ಲಿ ಡಿ.ಎನ್.ಎ ಮತ್ತು ಆರ್.ಎನ್.ಎ ಗಳ ಸ್ವರ ಸಂಯೋಜನೆಗಳು ಧ್ವನಿ ಮುದ್ರಣ ಮಾಡಿ ಜೀವಿಗಳಲ್ಲಿನ ಡಿ.ಎನ್.ಎ.ಗಳಿಗೆ ಒಂದು ನಿರ್ದಿಷ್ಟ ಸಂಗೀತ ಸ್ವರವಿರುವುದಾಗಿ ವಿವರಿಸಿದ್ದಾನೆ. ಪ್ರಕೃತಿಯಲ್ಲಿರುವ ಅನೇಕ ಭೌತಿಕ ತತ್ವಗಳನ್ನು ವಿಶ್ವವು ಅನುಸರಿಸುವಂತೆ ಜೀವಿಗಳೂ ನಿರ್ದಿಷ್ಟವಾಗಿ ಅನುಕರಿಸುವುದೆಂದು ವಿವರಿಸಿದ್ದಾನೆ. ಕೆಲವೊಂದು ಸ್ವರಗಳು ವಿಷಾದ ವ್ಯಕ್ತಪಡಿಸಿದರೆ, ಮತ್ತೆ ಕೆಲವು ಸಂತೋಷ, ಉನ್ಮಾದಗಳನ್ನು ಹುಟ್ಟಿಸು..... ರಾಸಾಯನಿಕ ಹಂತದ ಸಂಗೀತ ಸ್ವರಗಳೇ ಜೀವಿಗಳ ನಡವಳಿಕೆ ಮತ್ತು ವರ್ತನೆಗಳಿಗೆ ಕಾರಣ ಎಂದಿದ್ದಾನೆ. ಜೀವಿಗಳಲ್ಲಿರುವ ಅನುವಂಶಿಕತೆ ಬರೀ ನೀಲನಕ್ಷೆಯಲ್ಲಿ ಅದು ಅವುಗಳ ಜೀವನದ ಸ್ವರಗಳನ್ನು ಹೊತ್ತಿರುವ ಸಂಗೀತವೆಂದು ವಿವರಿಸುತ್ತಾನೆ. ಕೋಳಿಗಳ ಕಣ್ಣಿನ ಕೋಶ, ಕೆಲವೊಂದು ಮೀನು ಶಿಲೀಂದ್ರ, ಯೀಸ್ಟ್ ಮತ್ತು ಮಾನವ ಮೆದುಳಿನ ಕೋಶಗಳ ವಂಶವಾಹಿಗಳನ್ನು ಧ್ವನಿಮುದ್ರಿಸಿ ಸಂಗೀತಸ್ವರ ನೀಡಲಾಗಿದೆ. ಕ್ಯಾನ್ಸರ್ ಕಾರಕ ಆಂಕೋಜೀನಕಗಳ ಸ್ವರ ವಿಶಾದದ ಕರಾಳ ಛಾಯೆ ಮೂಡಿಸಿದರೆ ಕಣ್ಣಿನ ಮಸೂರದ .... ವಾಹಿಗಳು ಬೆಳಕಿನ ಪಾರದರ್ಶಕ ಸ್ವರ ಕಂಪನ ನೀಡುವುದಾಗಿ ಬಣ್ಣಿಸುತ್ತಾನೆ. ಈ ನಿಟ್ಟಿನ ಸಂಶೋಧನೆಗಳು ಜೀವಿ ವರ್ತನೆಗಳಿಗೆ ಹೊಸ ರೂಪ ನೀಡಬಹುದೇನೊ. 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ